ಜಗಳಗಂಟ ಜಗನ್ ಗೆ ಮಾತಲ್ಲೇ ಗುಂಡ್ ಪಿನ್ ಚುಚ್ಚಿದ ಸಂಯುಕ್ತ ಹೆಗ್ಡೆ | Filmibeat Kannada

2017-12-14 1

ಮಾತು ಮಾತಿಗೂ ಉರಿದು ಬಿದ್ದು, ಎಲ್ಲರ ಮೇಲೂ ಕೂಗಾಡುವ 'ಜಗಳಗಂಟ' ಜಗನ್ನಾಥ್ ಚಂದ್ರಶೇಖರ್ ಗೆ 'ಕಿರಿಕ್' ಹುಡುಗಿ ಸಂಯುಕ್ತ ಹೆಗ್ಡೆ ತಮ್ಮ ಮಾತಲ್ಲೇ ಗುಂಡ್ ಪಿನ್ ಚುಚ್ಚಿದ್ದಾರೆ.''ನಿಮ್ಮನ್ನ ಮನೆಗೆ ಕಳುಹಿಸಿದ್ಮೇಲೆ ನಾನು ಮನೆಗೆ ಹೋಗೋದು'' ಅಂತ ಜಗನ್ನಾಥ್ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ ನಟಿ ಸಂಯುಕ್ತ ಹೆಗ್ಡೆ. ಸಾಲದಕ್ಕೆ, ''ಹೊರಗಡೆ ಗರ್ಲ್ ಫ್ರೆಂಡ್ ಇದ್ದರೂ, ಆಶಿತಾ ಜೊತೆ ಮಾಡಿದ್ದೇನು.?'' ಎಂದು ನೇರವಾಗಿ ಪ್ರಶ್ನಿಸಿದ್ದಾರೆ ಮಿಸ್.ಸಂಯುಕ್ತ.'ಬಿಗ್ ಬಾಸ್' ಮನೆಯೊಳಗೆ 'ವೈಲ್ಡ್ ಕಾರ್ಡ್ ಎಂಟ್ರಿ' ರೂಪದಲ್ಲಿ ಎಂಟ್ರಿಕೊಟ್ಟಿರುವ ನಟಿ ಸಂಯುಕ್ತ ಹೆಗ್ಡೆ, ಜಗನ್ ಜೊತೆ ಮಾಡಿಕೊಂಡ 'ಕಿರಿಕ್' ಕುರಿತ ಸಂಪೂರ್ಣ ವಿವರ ಇಲ್ಲಿದೆ. 'ಬಿಗ್ ಬಾಸ್' ಮನೆಯೊಳಗೆ ಕಾಲಿಡುತ್ತಿದ್ದಂತೆಯೇ, ಎಲ್ಲರ ಬಗ್ಗೆ ಕಾಮೆಂಟ್ ಮಾಡಲು ಶುರು ಮಾಡಿದ ಸಂಯುಕ್ತ, ''ನಿಮಗೆ ಒಂದು ಪ್ರಶ್ನೆ ಕೇಳ್ತೀನಿ. ನಿಜವಾದ ಉತ್ತರ ನೀಡಬೇಕು'' ಎಂದು ಜಗನ್ ಜೊತೆ ಮಾತಿಗಿಳಿದರು.''ನಿಮಗೆ ದುಬೈನಲ್ಲಿ ಗರ್ಲ್ ಫ್ರೆಂಡ್ ಇದ್ದಾರೆ ಅಲ್ವಾ.?'' ಅಂತ ಸಂಯುಕ್ತ ಪ್ರಶ್ನೆ ಕೇಳಿದಾಗ ''ಹೌದು'' ಎಂದು ಜಗನ್ ಒಪ್ಪಿಕೊಂಡರು. ಆಗ, ''ಮತ್ತೆ ಆಶಿತಾ ಜೊತೆ ನಿಮ್ಮ ಕಡೆಯಿಂದ ಏನಿತ್ತು.?'' ಎಂದು ಪ್ರಶ್ನಿಸಿದರು ನಟಿ ಸಂಯುಕ್ತ

Bigg Boss Kannada 5: Week 8: big boss is one of the big reality show in colors kannada and there samyutha hegde gave guest entry in to bigg boss house and there she started to comment about contestants

Free Traffic Exchange

Videos similaires